ಧ್ಯೇಯೋದ್ದೇಶಗಳು

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು  ತನ್ನ ಸದಸ್ಯರಿಗೆ ಅತಿ ಹೆಚ್ಚಿನ ಲಾಭಾಂಶವನ್ನು ಕೊಡಲು ಹಾಗೂ ಅವಶ್ಯಕ ತಾಂತ್ರಿಕ ಸೌಲಭ್ಯವನ್ನು ಒದಗಿಸಿ, ಹಾಲು ಉತ್ಪಾದನೆ ಹೆಚ್ಚಿಸಿ, ತನ್ನ ಗ್ರಾಹಕರಿಗೆ ಪರಿಪೂರ್ಣ ತೃಪ್ತಿಯಾಗುವಂತೆ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಲು, ಆರ್ಥಿಕವಾಗಿ ಸಬಲತೆಯನ್ನು ಹೊಂದಿ ಕರ್ನಾಟಕ ಸಹಕಾರಿ ಕ್ಷೀರ ರಂಗದಲ್ಲಿಯೇ ಅತ್ಯುನ್ನತ ಸ್ಥಾನದಲ್ಲಿ ಇರುವಂತೆ ವಿಶೇಷ ಪ್ರಯತ್ನ ಮಾಡಲು ಬದ್ಧವಾಗಿರುತ್ತದೆ

ನಮ್ಮ ದೃಷ್ಟಿಕೋನ

  • ಗ್ರಾಹಕರ ಮೊದಲ ಆಯ್ಕೆಯಾಗಿ ಬೆಳೆಯುವುದು.
  • ನಮ್ಮ ಗ್ರಾಹಕರಿಗೆ ಅತ್ಯಂತ ಸ್ವಚ್ಛ ಮತ್ತು ಆರೋಗ್ಯಕರ ಹಾಲನ್ನು ಪೂರೈಸುವುದು — ಪೋಷಕಾಂಶದ ಕಾಳಜಿ ಪ್ರಾಣಿಗಳ ಆರೈಕೆಯಿಂದಲೇ ಆರಂಭವಾಗುವಂತೆ, ಪೌಷ್ಠಿಕತೆಯಿಂದ ಸಮೃದ್ಧ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನೀಡುವುದು.
  • ನಮ್ಮ ಕೃಷಿ ಪರಂಪರೆಯನ್ನು ಕಾಪಾಡಿ, ಸ್ಥಳೀಯ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಿ, ಗ್ರಾಮೀಣ ಸಮುದಾಯಗಳ ಅಭಿವೃದ್ಧಿ ಮತ್ತು ಶಿಕ್ಷಣಕ್ಕೆ ಉತ್ತೇಜನ ನೀಡುವುದು.
  • ಪರಿಸರದ ಸಂವೇದನೆಯನ್ನು ಕಾಪಾಡಿಕೊಳ್ಳುವುದು.

ಮೌಲ್ಯಗಳು

  • ಪ್ರಾಮಾಣಿಕತೆ
  • ಪರಸ್ಪರ ಗೌರವ
  • ರಾಜಕೀಯ ರಹಿತವಾಗಿ ಬದ್ಧರಾಗಿರುವುದು
  • ಎಲ್ಲಾ ರಂಗಗಳಲ್ಲಿ ಅತ್ಯುನ್ನತ ಗುಣಮಟ್ಟ ಹೊಂದುವುದು
  • ರಾಜ ನಿಷ್ಠೆ ಮತ್ತು ಸಮರ್ಪಣೆ
  • ಶಿಸ್ತು ಪಾಲನೆ
  • ಸಮಯ ಪಾಲನೆ
  • ಪಾರದರ್ಶಕತೆ

ನಾವು ಕೆಲಸದ ಗೌರವ ಮತ್ತು ನೈತಿಕ ಮೌಲ್ಯಗಳಿಗೆ ಅತ್ಯಂತ ಪ್ರಾಮುಖ್ಯತೆ ನೀಡುತ್ತೇವೆ.

ನಮ್ಮ ಮೌಲ್ಯಗಳು ಬದ್ಧತೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಪಾರದರ್ಶಕತೆ, ರಾಜ ನಿಷ್ಠೆ ಮತ್ತು  ಸಮರ್ಪಣೆ. ಈ ಮೌಲ್ಯಗಳೇ ನಮ್ಮ “ಮೂಲಭೂತ ಅಸ್ತಿತ್ವ (CORE)” ಆಗಿದ್ದು, ನಾವು ಕೈಗೊಳ್ಳುವ ಪ್ರತಿಯೊಂದು ಕ್ರೀಯೆಯಲ್ಲಿ ಅವುಗಳನ್ನು ಪ್ರದರ್ಶಿಸುತ್ತೇವೆ

ನಾವು ಪ್ರಕ್ರೀಯೆಯಿಂದ ವಿತರಣೆಯವರೆಗೆ ಹಾಗೂ ಮಾನವ ಸಂಪನ್ಮೂಲ ನಿರ್ವಹಣೆಯವರೆಗೂ ಅತ್ಯುತ್ತಮ ಗುಣಮಟ್ಟವನ್ನು ನಂಬುತ್ತೇವೆ.

ನಾವು ನಮ್ಮ ಸಂಪನ್ಮೂಲಗಳನ್ನು ಸಮರ್ಥವಾಗಿ ಸಂರಕ್ಷಿಸಿ, ಜಾಣ್ಮೆಯಿಂದ ಬಳಸುವಲ್ಲಿ ಎಚ್ಚರಿಕೆಯಿಂದಿರುತ್ತೇವೆ.