ಕಾರ್ಯಾಚರಣೆಯ ವ್ಯಾಪ್ತಿ
ವಿಮುಲ್‌ನ ಮಾರುಕಟ್ಟೆ ವ್ಯಾಪ್ತಿ ಸಂಪೂರ್ಣವಾಗಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ಒಳಗೊಂಡಿದೆ.
ಮಾರಾಟ ಮತ್ತು ವಿತರಣಾ ಪದ್ಧತಿಗಳು
ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಂಘದಿಂದ ನೇಮಕಗೊಂಡ ಚಿಲ್ಲರೆ ವ್ಯಾಪಾರಿಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಹಾಲನ್ನು ವ್ಯಾಪಾರಿಗಳಿಗೆ ಒಪ್ಪಂದದ ಆಧಾರದ ಮೇಲೆ ನೇಮಿಸಲಾದ ಉಷ್ಣನಿರೋಧಕ (ಇನ್ಸುಲೇಟೆಡ್) ಸಾರಿಗೆ ವಾಹನಗಳ ಮೂಲಕ ಪೂರೈಸಲಾಗುತ್ತದೆ. ಸಾರಿಗೆ ಗುತ್ತಿಗೆದಾರರು ಹಾಲಿನ ವಿತರಣೆ ಯನ್ನು ವ್ಯಾಪಾರಿಗಳಿಂದ ಮಾರಾಟ ಮಾಡಿ ಸಂಗ್ರಹಣೆಯಾದ ಹಣವನ್ನು ಡೈರಿಗೆ ಠೇವಣಿ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ವ್ಯವಹಾರದ ಪ್ರಮಾಣದ ಆಧಾರದ ಮೇಲೆ ಸಾರಿಗೆ ಗುತ್ತಿಗೆದಾರರು ಮತ್ತು ವ್ಯಾಪಾರಿಗಳಿಂದ ಸೂಕ್ತ ಭದ್ರತೆಗಳನ್ನು (ಸೆಕ್ಯುರಿಟಿ) ಪಡೆಯಲಾಗುತ್ತದೆ. ವ್ಯಾಪಾರಿಗಳು ತಮ್ಮ ಹಾಲಿನ ಬೇಡಿಕೆಯ(ಇಂಡೆಂಟ್) ಪ್ರಮಾಣಯನ್ನು ಮಾರುಕಟ್ಟೆ ವಿಭಾಗದ ತಂತ್ರಾ0ಶ ದಲ್ಲಿ ತಮ್ಮ ಮೊಬೈಲ್ ಮೂಲಕ ಸಲ್ಲಿಸುತ್ತಾರೆ. ಅದರ ಅನುಸಾರ ಮಾರ್ಗವಾರು ಬೇಡಿಕೆಯ ಪಟ್ಟಿ ತಯಾರಾಗಿ ಗುತ್ತಿಗೆದಾರರಿಗೆ ವಿತರಿಸಲಾಗುತ್ತದೆ. ರಾತ್ರಿ ಪ್ರಕ್ರೀಯೆಗೊಳಿಸಿ ಪ್ಯಾಕ್ ಮಾಡಿದ ಹಾಲು ಬೆಳಿಗ್ಗೆ 5.00 ಗಂಟೆಯೊಳಗೆ ಚಿಲ್ಲರೆ ವ್ಯಾಪಾರಿಗಳಿಗೆ ವಿತರಿಸಲಾಗುತ್ತದೆ. ಬೇಡಿಕೆ ಇರುವ ಪ್ರದೇಶಗಳಿಗೆ ಮಧ್ಯಾಹ್ನವೂ ಹಾಲಿನ ವಿತರಣೆಯನ್ನು ಕೈಗೊಳ್ಳಲಾಗುತ್ತದೆ.
ಹಾಲು ಮತ್ತು ಹಾಲು ಉತ್ಪನ್ನಗಳ ವಿತರಣಾ ಮಾರ್ಗಗಳು
ಸಂಘದ ಹಾಲು ಮತ್ತು ಹಾಲು ಉತ್ಪನ್ನಗಳ ವಿತರಣೆಗೆ ಎರಡು ವಿಧದ ಮಾರ್ಗಗಳಿವೆ. ಮೊದಲನೆಯದಾಗಿ, ಸಂಘವು ತನ್ನ ಕಾರ್ಯಾಚರಣಾ ಪ್ರದೇಶದಲ್ಲಿರುವ ಒಪ್ಪಂದದ ವಾಹನಗಳ ಮೂಲಕ ನೇಮಕಗೊಂಡ ವ್ಯಾಪಾರಿಗಳ ಸಹಾಯದಿಂದ ನೇರವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವಿತರಿಸಲಾಗುತ್ತದೆ. ವ್ಯಾಪಾರಿಗಳು ತಮ್ಮ ಮಾರಾಟ ಮಳಿಗೆಗಳ ಮೂಲಕ ನೇರವಾಗಿ ಗ್ರಾಹಕರಿಗೆ ಹಾಲು ಮಾರಾಟ ಮಾಡುವುದರ ಜೊತೆಗೆ, ಮನೆಮನೆಗೆ ಹಾಲು ಪೂರೈಸುವ ಮೂಲಕವೂ (ಹೋಂ ಡೆಲಿವರಿ ಬಾಯ್ಸ್ ಮೂಲಕ) ಸೇವೆ ಒದಗಿಸುತ್ತಾರೆ. ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಿಸಲು ಸಂಘವು ಚಲನೆಯಲ್ಲಿರುವ ಮಾರಾಟದ ವಾಹನಗಳನ್ನು ನಿಯೋಜಿಸಿದೆ. ಎರಡನೇ ವಿತರಣಾ ಮಾರ್ಗವು ಕೆಎಂಎಫ್ (KMF) ಮೂಲಕ ನಡೆಯುತ್ತದೆ. ಕೆಎಂಎಫ್‌ನ ಹಾಲಿನ ಚಲನೆ ಯೋಜನೆಯ (Milk Movement Plan) ಪ್ರಕಾರ, ಸಂಘವು ಹಾಲನ್ನು ಬಲ್ಕ್ ರೂಪದಲ್ಲಿ ನೆರೆಹೊರೆಯ ಸಂಘಗಳು/ಡೈರಿಗಳಿಗೆ ಮಾರಾಟ ಮಾಡುತ್ತದೆ. ಸಂಘವು ಹಾಲಿನ ಉತ್ಪನ್ನಗಳನ್ನು — ತುಪ್ಪ (Ghee), ಎಸ್‌ಎಂಪಿ (SMP), ಡಬ್ಲ್ಯೂಎಂಪಿ (WMP), ಡೈರಿ ವೈಟನರ್ (Dairy Whitener), ಮಜ್ಜಿಗೆ (Buttermilk) — ಕೆಎಂಎಫ್ ಮೂಲಕ ಮಾರಾಟ ಮಾಡುತ್ತದೆ. ಇದಲ್ಲದೆ, ಸಂಘವು ಕೆಎಂಎಫ್ ಸ್ಥಾಪಿಸಿದ ಚಿಲ್ಲರೆ ಮಾರಾಟ ಮಾರ್ಗಗಳ ಮೂಲಕ ಹಾಗೂ ನೇರ ಬಲ್ಕ್ ಮಾರಾಟದ ಮೂಲಕವೂ ಹಾಲಿನ ಉತ್ಪನ್ನಗಳನ್ನು (ತುಪ್ಪ, ಎಸ್‌ಎಂಪಿ, ಬೆಣ್ಣೆ) ಮಾರಾಟ ಮಾಡುತ್ತದೆ.
ಕೈಗೊಂಡ ಮಾರುಕಟ್ಟೆ ಪ್ರಮುಖ ಕ್ರಮಗಳು
- ಗ್ರಾಹಕರ ಅಗತ್ಯಗಳನ್ನು ಪೂರೈಸಲು ಚಿಲ್ಲರೆ ಮಾರುಕಟ್ಟೆಯಲ್ಲಿ ವಿವಿಧ ಹಾಲಿನ ಪ್ರಕಾರಗಳನ್ನು ಪರಿಚಯಿಸುವ ಮೂಲಕ ಉತ್ಪನ್ನಗಳ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ — ಟೋನ್ಡ್ ಮಿಲ್ಕ್ (TM), ಫುಲ್ ಕ್ರೀಮ್ ಮಿಲ್ಕ್ (FCM), ಸ್ಟಾಂಡರ್ಡ್ ಬಫಲೋ ಮಿಲ್ಕ್ (SBM), ಎಮ್ಮೆ ಹಾಲು ಇತ್ಯಾದಿ, 250 ಮಿ.ಲಿ., 500 ಮಿ.ಲಿ. ಹಾಗೂ 1000 ಮಿ.ಲಿ. ಪ್ಯಾಕ್ ಗಾತ್ರಗಳಲ್ಲಿ ಲಭ್ಯವಿದೆ.
- ವಿಜಯಪುರ ಮತ್ತು ಬಾಗಲಕೋಟೆ ನಗರಗಳಲ್ಲಿ ಗ್ರಾಹಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಕೇಂದ್ರಗಳಲ್ಲಿ ದಿನಪೂರ್ತಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ವ್ಯಾಪಾರಿಗಳ ಸಹಾಯದಿಂದ ಗ್ರಾಹಕರಿಗೆ ಲಭ್ಯವಾಗುತ್ತವೆ.
- ಮಾರಾಟ ಮಳಿಗೆಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು ಪಾರ್ಲರ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಮಾರುಕಟ್ಟೆ ವಿಸ್ತರಣೆ. • ಗ್ರಾಮೀಣ ಪ್ರದೇಶಗಳಲ್ಲಿ ಮಾರುಕಟ್ಟೆ ವಿಸ್ತರಣೆಗಾಗಿ ಮೊಬೈಲ್ ಮೂಲಕ ಮಾರಾಟ ವಾಹನಗಳನ್ನು ನಿಯೋಜಿಸಲಾಗಿದೆ.
- ಮಾರಾಟದ ಚಾನಲ್ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಚೆಸ್ಟ್ ಕೂಲರ್‌ಗಳನ್ನು ನೀಡುವ ಮೂಲಕ ಶೀತ ಸರಪಳಿ (ಕೋಲ್ಡ್ ಚೈನ್) ಬಲಪಡಿಸಲಾಗಿದೆ.
- ಆಯ್ದ ಮಾರುಕಟ್ಟೆ ಪ್ರದೇಶಗಳಿಗೆ ಶೀತೀಕೃತ (ರೆಫ್ರಿಜರೆಟೆಡ್) ವಾಹನಗಳನ್ನು ನಿಯೋಜಿಸಲಾಗಿದೆ.
- ಶಾಲೆ, ಕಾಲೇಜು ವಿದ್ಯಾರ್ಥಿಗಳು ಮತ್ತು ಇತರೆ ಸಾಮಾಜಿಕ ಸಂಸ್ಥೆಗಳಿಗಾಗಿ ಡೈರಿ ಭೇಟಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವ್ಯಾಪಕ ಗ್ರಾಹಕ ಶಿಕ್ಷಣವನ್ನು ನೀಡಲಾಗಿದೆ.
- ಕೆಎಂಎಫ್‌ನ ವಿವಿಧ ಘಟಕಗಳು ಮತ್ತು ಸಂಘಗಳಿಂದ ತಯಾರಿಸಲಾದ ಹಾಲಿನ ಉತ್ಪನ್ನಗಳನ್ನು ಖರೀದಿಸಿ ಮಾರಾಟಕ್ಕಾಗಿ ಉತ್ಪನ್ನಗಳ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ.